ದೃಶ್ಯಂ 2 ನೋಡಿ ಮೆಚ್ಚಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

ಮುಂಬೈ| Krishnaveni K| Last Modified ಬುಧವಾರ, 24 ಫೆಬ್ರವರಿ 2021 (11:06 IST)
ಮುಂಬೈ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಮೊನ್ನೆಯಷ್ಟೇ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಈಗ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೆಚ್ಚುಗೆಯ ಮಾತನಾಡಿದ್ದಾರೆ.

 
ಸಿನಿಮಾ ನೋಡಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಅಶ್ವಿನ್, ‘ಕ್ಲೈಮ್ಯಾಕ್ಸ್ ನಲ್ಲಿ ಹೀರೋ ಪೊಲೀಸರನ್ನು ವಂಚಿಸಿ ಟ್ವಿಸ್ಟ್ ಕೊಟ್ಟಿದ್ದು ನೋಡಿದಾಗ ನಗು ತಡೆಯಲಾಗಲಿಲ್ಲ. ಅದ್ಭುತ ಸಿನಿಮಾ’ ಎಂದು ಬರೆದಿದ್ದರು. ಅಶ್ವಿನ್ ಟ್ವೀಟ್ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿರುವ ಮೋಹನ್ ಲಾಲ್, ‘ನಿಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸಿನಿಮಾ ಬಗ್ಗೆ ಪ್ರತಿಕ್ರಿಯೆ ಬರೆದಿರುವುದು ನೋಡಿ ಖುಷಿಯಾಯಿತು. ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ’ ಎಂದು ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :