ಬೆಂಗಳೂರು: ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬೆಂಗಳೂರು ನ್ಯಾಷನಲ್ ಅಕಾಡೆಮಿಯಲ್ಲಿ ಟೀಂ ಇಂಡಿಯಾಗೆ ಅರ್ಹತೆ ಗಿಟ್ಟಿಸುವ ಯೋ ಯೋ ಟೆಸ್ಟ್ ಪಾಸಾಗಿದ್ದಾರೆ. ಈ ವಿಷಯವನ್ನು ಸ್ವತಃ ಅಶ್ವಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇತ್ತೀಚೆಗೆ ಯುವರಾಜ್ ಸಿಂಗ್, ಸುರೇಶ್ ರೈನಾ ಯೋ ಯೋ ಟೆಸ್ಟ್ ಪಾಸಾಗದೇ ಇರುವ ಕಾರಣಕ್ಕೆ ಟೀಂ ಇಂಡಿಯಾಗೆ ಅರ್ಹತೆ ಗಿಟ್ಟಿಸಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.ಅಶ್ವಿನ್ ಕೌಂಟಿ ಕ್ರಿಕೆಟ್ ಆಡಿ ಮುಗಿಸಿ ಇದೀಗ ತವರಿಗೆ ಮರಳಿದ್ದಾರೆ.