ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಭಾರತೀಯ ತಂಡ ತಯಾರಾಗುತ್ತಿದ್ದು ಕಠಿಣ ತಾಲೀಮು ನಡೆಸಿದೆ. ಅದರಲ್ಲೂ ವಿಶೇಷವಾಗಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಬತ್ತಳಿಕೆಯಲ್ಲಿ ಹೊಸದೊಂದು ಬಾಣ ಸಿದ್ಧಪಡಿಸಿದ್ದಾರೆ. ಅಂತಹದ್ದೇನು ಹೊಸ ಅಸ್ತ್ರ ಅಂತೀರಾ? ಹೇಳಿ ಕೇಳಿ ಆಫ್ರಿಕನ್ ಪಿಚ್ ಗಳು ವೇಗಿಗಳ ಸ್ವರ್ಗ ಎನ್ನುವುದು ಮೊದಲ ಟೆಸ್ಟ್ ಪಂದ್ಯದಲ್ಲೇ ಸಾಬೀತಾಗಿದೆ. ಇದರಿಂದಾಗಿ ಸ್ಪಿನ್ನರ್ ಗಳಿಗೆ ಕೆಲಸವೇ ಇಲ್ಲದಂತಾಗಿದೆ.ಹೀಗಾಗಿ ಸ್ಪಿನ್ನರ್ ಅಶ್ವಿನ್ ವೇಗಿಯಾಗಿ ಪರಿವರ್ತನೆಯಾಗಿದ್ದಾರೆ. ಹಿರಿಯ