ಮುಂಬೈ: ಟೀಂ ಇಂಡಿಯಾದ ಪ್ರಮುಖ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದಿಂದ ಬಿಡುವು ಪಡೆದು ಕೌಂಟಿ ಕ್ರಿಕೆಟ್ ಆಡುವುದರತ್ತ ಅಶ್ವಿನ್ ಚಿತ್ತ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಶ್ವಿನ್ ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ. ಅವರಿಗೆ ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಚೇತೇಶ್ವರ ಪೂಜಾರ ಕೂಡಾ ಸಾಥ್ ನೀಡುವ ನಿರೀಕ್ಷೆಯಿದೆ. ಅಶ್ವಿನ್ ವಾರ್ಕ್ ಶೈರ್