ಲಂಡನ್: ಸಾಮಾನ್ಯವಾಗಿ ತಂಡದಿಂದ ಕೈ ಬಿಟ್ಟರೆ, ಅದೂ ಮಹತ್ವದ ಟೂರ್ನಿಯಲ್ಲಿ ಹೊರಗುಳಿಯುವಂತಾದರೆ ಪ್ರಮುಖ ಆಟಗಾರರೆನಿಸಿಕೊಂಡವರು ಮುನಿಸಿಕೊಳ್ಳುತ್ತಾರೆ. ಆದರೆ ಆರ್. ಅಶ್ವಿನ್ ಹಾಗಲ್ವಂತೆ! ಹಾಗಂತ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಈ ಬಗ್ಗೆ ಕೊಹ್ಲಿಯನ್ನು ಪ್ರಶ್ನಿಸಿದಾಗ ಅವರು ಈ ರೀತಿ ಹೇಳಿದ್ದಾರೆ.ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಅಶ್ವಿನ್ ತಮ್ಮ ಮೇಲೆ ಬೇಸರಿಸಿಕೊಳ್ಳುವುದಿಲ್ಲ. ಬದಲಾಗಿ ಬೆಂಬಲಿಸುತ್ತಾರೆ ಎಂದು ಕೊಹ್ಲಿ ಪ್ರಶಂಸಿಸಿದ್ದಾರೆ.