ಸಿಡ್ನಿ: ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಜಡೇಜಾ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಗೆ ಬಾಲ್ ತಗುಲಿದ ಪರಿಣಾಮ ಅರ್ಧದಲ್ಲೇ ಪಂದ್ಯ ಬಿಟ್ಟು ಹೊರನಡೆದಿದ್ದರು. ಅವರು ಬಳಿಕ ಬೌಲಿಂಗ್ ಮಾಡಿರಲಿಲ್ಲ. ಇದೀಗ ಅವರನ್ನು ಪರೀಕ್ಷಿಸಿದ ವೈದ್ಯರು ಸುರಕ್ಷತಾ ದೃಷ್ಟಿಯಿಂದ ಉಳಿದ ಪಂದ್ಯಗಳಲ್ಲಿ ಆಡದಂತೆ ಸೂಚಿಸಿದ್ದಾರೆ. ವಿಪರ್ಯಾಸವೆಂದರೆ ಏಕದಿನ ಸರಣಿಯಿಂದ ನಿನ್ನೆಯ ಪಂದ್ಯದವರೆಗೂ ಜಡೇಜಾ