ಕೊಲೊಂಬೊ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ತಮಗೆ ಐಸಿಸಿ ವಿಧಿಸಿರುವ ಒಂದು ಟೆಸ್ಟ್ ಪಂದ್ಯದ ನಿಷೇಧ ಶಿಕ್ಷೆಗೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮೈದಾನದಲ್ಲಿ ಅಶಿಸ್ತಿನ ವರ್ತನೆಗೆ ಜಡೇಜಾಗೆ ಮ್ಯಾಚ್ ರೆಫರಿ ಒಂದು ಪಂದ್ಯ ನಿಷೇಧ ಶಿಕ್ಷೆ ವಿಧಿಸಿರುವುದಕ್ಕೆ ಜಡೇಜಾ ತಮ್ಮ ಟ್ವಿಟರ್ ನಲ್ಲಿ ಶಾರುಖ್ ಖಾನ್ ರ ಸಿನಿಮಾವೊಂದರ ಡೈಲಾಗ್ ಒಂದನ್ನು ಉಲ್ಲೇಖಿಸಿದ್ದಾರೆ.ನಾನು ಒಳ್ಳೆಯವನಾಗಲು ಬಯಸಿದಾಗ ಇಡೀ ಜಗತ್ತೇ ಕುಖ್ಯಾತಿಯಾಗಲು ಬಯಸಿತು ಎಂದು ಜಡೇಜಾ ವಿಡಂಬನಾತ್ಮಕವಾಗಿ ಬರೆದುಕೊಂಡಿದ್ದಾರೆ.