ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಬಿದ್ದು ಮಂಡಿಗೆ ಗಾಯ ಮಾಡಿಕೊಂಡಿರುವ ವೇಗಿ ಉಮೇಶ್ ಯಾದವ್ ಸ್ಥಿತಿ ಗತಿ ಬಗ್ಗೆ ನಾಯಕ ಅಜಿಂಕ್ಯಾ ರೆಹಾನೆ ಮಾಹಿತಿ ನೀಡಿದ್ದಾರೆ. ಪಂದ್ಯದ ನಂತರ ಮಾತನಾಡಿರುವ ರೆಹಾನೆ ‘ಉಮೇಶ್ ಗಾಯದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಅವರು ಮುಂದಿನ ಪಂದ್ಯಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ’ ಎಂದಿದ್ದಾರೆ. ಒಂದು ವೇಳೆ ಉಮೇಶ್ ಯಾದವ್ ಚೇತರಿಸಿಕೊಳ್ಳದೇ ಹೋದರೆ ಭಾರತ ಯುವ ವೇಗಿ ಟಿ ನಟರಾಜನ್ ಗೆ ಅವಕಾಶ