ಸ್ಪೋಟಕ ಬ್ಯಾಟ್ಸ್ಮನ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಯಾವಾಗ ವಿವಾಹ ಬಂಧನಕ್ಕೊಳಗಾಗುತ್ತಾರೆ ಎಂದು ಅವರ ಅಭಿಮಾನಿಗಳು ಬಹುಕಾಲದಿಂದ ಇಟ್ಟುಕೊಂಡ ನಿರೀಕ್ಷೆಗೆ ಈಗ ತೆರೆ ಬಿದ್ದಿದೆ. ವರ್ಷಾಂತ್ಯದಲ್ಲಿ ತಾವು ವಿವಾಹ ಬಂಧನಕ್ಕೊಳಗಾಗಲಿದ್ದೇನೆ ಎಂದು ಸ್ವತಃ ಯುವಿ ಬಾಯ್ಬಿಟ್ಟಿದ್ದಾರೆ.