ರಿಷಬ್ ಪಂತ್ ಗರ್ಲ್ ಫ್ರೆಂಡ್ ಎಂದುಕೊಂಡಿದ್ದ ನಟಿಗೆ ಕ್ರಿಕೆಟರಿಗರನ್ನೇ ಪರಿಚಯವಿಲ್ವಂತೆ!

ಮುಂಬೈ| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (09:48 IST)
ಮುಂಬೈ: ಟೀಂ ಇಂಡಿಯಾ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಗರ್ಲ್ ಫ್ರೆಂಡ್ ಎನ್ನಲಾಗಿರುವ ನಟಿ ಊರ್ವರಿ ರೌಟೇಲಾಗೆ ಕ್ರಿಕೆಟಿಗರೆಂದರೆ ಯಾರೆಂದೇ ಗೊತ್ತಿಲ್ವಂತೆ! ಹಾಗಂತ ಸೋಷಿಯಲ್ ಮೀಡಿಯಾ ಪ್ರಶ್ನೋತ್ತರಾವಳಿಯಲ್ಲಿ ನಟಿ ಉತ್ತರಿಸಿದ್ದಾರೆ.  
> ಅಭಿಮಾನಿಯೊಬ್ಬರು ‘ಫೇವರಿಟ್ ಇಂಡಿಯನ್ ಕ್ರಿಕೆಟಿಗ ಯಾರು?’ ಎಂದು ಕೇಳಿದ್ದಕ್ಕೆ ಊರ್ವಶಿ ‘ನಾನು ಕ್ರಿಕೆಟ್ ನೋಡಲ್ಲ. ಹಾಗಾಗಿ ಯಾವ ಕ್ರಿಕೆಟಿಗರನ್ನೂ ಗೊತ್ತಿಲ್ಲ. ನನಗೆ ಸಚಿನ್ ಸರ್, ವಿರಾಟ್ ಸರ್ ಎಂದರೆ ತುಂಬಾ ಗೌರವವಿದೆ’ ಎಂದು ಉತ್ತರಿಸಿದ್ದಾರೆ.>   ಕಳೆದೊಂದು ವರ್ಷದಿಂದ ರಿಷಬ್ ಜೊತೆಗೆ ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಈಗ ನೋಡಿದ್ರೆ ನಟಿ ಈ ಮಟ್ಟಿಗೆ ಉಲ್ಟಾ ಹೊಡೆದಿರುವುದು ನೋಡಿದರೆ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ!ಇದರಲ್ಲಿ ಇನ್ನಷ್ಟು ಓದಿ :