ರಿಷಬ್ ಪಂತ್ ಗೆ ಇನ್ನು ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ

ಮುಂಬೈ| Krishnaveni K| Last Modified ಗುರುವಾರ, 21 ಜನವರಿ 2021 (08:31 IST)
ಮುಂಬೈ: ಆಸ್ಟ್ರೇಲಿಯಾ ಸರಣಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ರ ನಸೀಬೇ ಬದಲಿಸಿದೆ. ಇಷ್ಟು ದಿನ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡುತ್ತಿದ್ದ ರಿಷಬ್ ಈಗ ಸ್ಥಾನ ಖಾಯಂ ಮಾಡಿದ್ದಾರೆ.

 
ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಲು ಪ್ರಮುಖ ಪಾತ್ರ ವಹಿಸಿದ ರಿಷಬ್ ಈಗ ಎಲ್ಲರ ಕಣ್ಣಲ್ಲಿ ಹೀರೋ ಆಗಿದ್ದಾರೆ. ಇದುವರೆಗೆ ಟೆಸ್ಟ್ ತಂಡಕ್ಕೆ ವೃದ್ಧಿಮಾನ್ ಸಹಾ ಜೊತೆಗೆ ಅವರು ಪೈಪೋಟಿ ನಡೆಸಬೇಕಾಗಿತ್ತು. ಆದರೀಗ ಈ ಒಂದು ಸರಣಿ ಅವರ ಭವಿಷ್ಯವನ್ನೇ ಬದಲಾಯಿಸಿದೆ.
ಇದರಲ್ಲಿ ಇನ್ನಷ್ಟು ಓದಿ :