ಧೋನಿಯಂತಾಗಲು ಇನ್ನೂ ಮಾಗಬೇಕು ರಿಷಬ್ ಪಂತ್

ಮುಂಬೈ| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:04 IST)
ಮುಂಬೈ: ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಗಾಗ ಏನೇನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ.

 
ಆದರೆ ಧೋನಿ ಅನುಕರಿಸಲು ಹೋಗುವ ರಿಷಬ್ ಇದುವರೆಗೆ ಬ್ಯಾಟಿಂಗ್ ಇರಲಿ, ಕೀಪಿಂಗ್ ಇರಲಿ ಎರಡರಲ್ಲೂ ಎಡವಿದ್ದಾರೆ. ಅದೂ ಸಾಲದೆಂಬಂತೆ ಡಿಆರ್ ಎಸ್ ತೆಗೆದುಕೊಳ್ಳುವಲ್ಲಿಯೂ ಆಗಾಗ ತಪ್ಪು ಮಾಹಿತಿ ನೀಡಿ ಅಭಿಮಾನಿಗಳಿಂದ ಟೀಕೆಗೊಳಗಾಗುತ್ತಲೇ ಇರುತ್ತಾರೆ.
 
ಧೋನಿಗೆ ಇರುವ ಅತೀ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರ ಶಾಂತ ಸ್ವಭಾವ, ಖಚಿತತೆ. ಇವೆರಡೂ ಕಲಿಯಲು ತಾಳ್ಮೆ ಬೇಕು. ಅದನ್ನು ಕಲಿಯಲು ರಿಷಬ್ ಗೆ ಇನ್ನೂ ಸಮಯ ಬೇಕು. ಆದರೆ ರಿಷಬ್ ರಲ್ಲಿ ಆತುರತೆಯಿದೆ, ತಾಳ್ಮೆ ಇನ್ನೂ ಕಲಿಯಬೇಕಿದೆ. ಅದೇ ಕಾರಣಕ್ಕೆ ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಡಿಆರ್ ಎಸ್ ವಿಚಾರದಲ್ಲಿ ಅವರು ತಪ್ಪು ನಿರ್ಧಾರ ತೆಗೆದುಕೊಂಡು ಟೀಕೆಗೊಳಗಾಗಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಸಮಯ ನೀಡಬೇಕು ಎಂದು ಟೀಂ ಇಂಡಿಯಾ ಚಿಂತಕರ ಚಾವಡಿ ಹೇಳುವುದು ಇದೇ ಕಾರಣಕ್ಕೆ.
ಇದರಲ್ಲಿ ಇನ್ನಷ್ಟು ಓದಿ :