ಕಿರುಚಾಡುವ ವಿಕೆಟ್ ಕೀಪರ್ ರಿಷಬ್ ಪಂತ್

ಅಹಮ್ಮದಾಬಾದ್| Krishnaveni K| Last Modified ಶುಕ್ರವಾರ, 26 ಫೆಬ್ರವರಿ 2021 (09:18 IST)
ಅಹಮ್ಮದಾಬಾದ್: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್, ತಮ್ಮ ಕೀಪಿಂಗ್ ಬ್ಯಾಟಿಂಗ್ ಜೊತೆಗೆ ಕಿರುಚಾಡುವುದರಲ್ಲೂ ಸುದ್ದಿ ಮಾಡುತ್ತಿದ್ದಾರೆ.

 
ವಿಕೆಟ್ ಕೀಪರ್ ವಿಕೆಟ್ ಹಿಂದುಗಡೆ ಇರುವುದರಿಂದ ಮೈಕ್ರೋಫೋನ್ ನಿಂದಾಗಿ ಅವರು ಆಡುವ ಮಾತುಗಳೆಲ್ಲಾ ವೀಕ್ಷಕರಿಗೂ ಕೇಳಿಸುತ್ತಲೇ ಇರುತ್ತದೆ. ಅದರಲ್ಲೂ ರಿಷಬ್ ಸದಾ ವಾಚಾಳಿ. ಅವರು ಎಷ್ಟು ಕಿರುಚಾಡುತ್ತಾರೆಂದರೆ ರನ್ ಗಾಗಿ ಓಡುವ ಬ್ಯಾಟ್ಸ್ ಮನ್ ಕೂಡಾ ಕನ್ ಫ್ಯೂಸ್ ಆಗುತ್ತಾರೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮಾಷೆ ಮಾಡಿದ್ದಾರೆ. ಇನ್ನು, ಅಜಿಂಕ್ಯಾ ರೆಹಾನೆ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾಗ ರಿಷಬ್ ಪದೇ ಪದೇ ಡಿಆರ್ ಎಸ್ ಗೆ ಮನವಿ ಸಲ್ಲಿಸುತ್ತಿದ್ದರಿಂದ ಕಿರಿ ಕಿರಿ ಅನುಭವಿಸಿದ್ದರು. ಆದರೂ ಅವರು ತಾಳ್ಮೆಯಿಂದ ನಿಭಾಯಿಸಿದರು. ಎದುರಾಳಿಗಳಿಗೆ ಇದರಿಂದ ಕಿರಿ ಕಿರಿಯಾದರೂ, ವೀಕ್ಷಕರಿಗೆ ಪಕ್ಕಾ ಮನರಂಜನೆ ಒದಗಿಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :