ಕೊರೋನಾದಿಂದ ಚೇತರಿಸಿಕೊಂಡ ರಿಷಬ್ ಪಂತ್

ಲಂಡನ್| Krishnaveni K| Last Modified ಮಂಗಳವಾರ, 20 ಜುಲೈ 2021 (10:36 IST)
ಲಂಡನ್: ಇಂಗ್ಲೆಂಡ್ ಪ್ರವಾಸದ ವೇಳೆ ಕೊರೋನಾ ಸೋಂಕಿಗೊಳಗಾಗಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
 

ಮತ್ತೆ ಕೊರೋನಾ ಪರೀಕ್ಷೆಗೊಳಗಾಗಿರುವ ರಿಷಬ್ ಗೆ ಈಗ ನೆಗೆಟಿವ್ ವರದಿ ಬಂದಿದೆ. ಜುಲೈ 20 ಕ್ಕೆ ಮತ್ತೆ ರಿಷಬ್ ಪಂತ್ ಬಯೋ ಬಬಲ್ ವಾತಾವರಣಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
 
ಜುಲೈ 8 ರಂದು ರಿಷಬ್ ಪಂತ್ ಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇದೀಗ ಚೇತರಿಸಿಕೊಂಡಿರುವ ಪಂತ್ ಎರಡನೇ ಅಭ್ಯಾಸ ಪಂದ್ಯದ ವೇಳೆ ತಂಡಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ.
ಇದರಲ್ಲಿ ಇನ್ನಷ್ಟು ಓದಿ :