Widgets Magazine

ರಾಂಚಿ ಟೆಸ್ಟ್: ಟೀಂ ಇಂಡಿಯಾಗೆ ಆಘಾತ, ಇದ್ದಕ್ಕಿದ್ದಂತೆ ಫೀಲ್ಡ್ ಗೆ ಬಂದ ರಿಷಬ್ ಪಂತ್

ರಾಂಚಿ| Krishnaveni K| Last Modified ಸೋಮವಾರ, 21 ಅಕ್ಟೋಬರ್ 2019 (17:08 IST)
ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಟೀಂ ಇಂಡಿಯಾಗೆ ಆಘಾತದ ಸುದ್ದಿಯೊಂದು ಸಿಕ್ಕಿದೆ.

 
ಮೂರನೇ ಅವಧಿಯಲ್ಲಿ ಪಾನೀಯ ವಿರಾಮದ ಬಳಿಕ ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಚೆಂಡು ಹಿಡಿಯಲು ಹೋಗಿ ಕೈ ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇದರಿಂದಾಗಿ ತಕ್ಷಣವೇ ಅವರು ಮೈದಾನ ಬಿಟ್ಟು ಫಿಸಿಯೋ ಸಹಾಯದಿಂದ ಪೆವಿಲಿಯನ್‍ ಗೆ ಮರಳಿದ್ದಾರೆ.
 
ಹೊಸ ನಿಯಮದ ಪ್ರಕಾರ ಒಬ್ಬ ವಿಕೆಟ್ ಕೀಪರ್ ಗಾಯಗೊಂಡರೆ ಆಡುವ ಬಳಗದಲ್ಲಿ ಸ್ಥಾನ ಪಡೆಯದೇ ಇದ್ದರೂ ಇನ್ನೊಬ್ಬ ವಿಕೆಟ್ ಕೀಪರ್ ಆಡಬಹುದಾಗಿದೆ. ಹೀಗಾಗಿ ಸಹಾ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ಮೈದಾನಕ್ಕಿಳಿದು ವಿಕೆಟ್ ಕೀಪರ್ ಕರ್ತವ್ಯ ನಿರ್ವಹಿಸಬೇಕಾಯಿತು.
ಇದರಲ್ಲಿ ಇನ್ನಷ್ಟು ಓದಿ :