ಚೆನ್ನೈ ಪಂದ್ಯದ ಸಂಭಾವನೆಯನ್ನು ಹಿಮಸ್ಪೋಟ ಸಂತ್ರಸ್ತರಿಗೆ ಅರ್ಪಿಸಲಿರುವ ರಿಷಬ್ ಪಂತ್

ಚೆನ್ನೈ| Krishnaveni K| Last Updated: ಸೋಮವಾರ, 8 ಫೆಬ್ರವರಿ 2021 (10:07 IST)
ಚೆನ್ನೈ: ಉತ್ತರಾಖಂಡ ಹಿಮಸ್ಪೋಟದಲ್ಲಿ ಸಂತ್ರಸ್ತರಾದವರಿಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಚೆನ್ನೈ ಪಂದ್ಯದ ಸಂಭಾವನೆಯನ್ನೇ ಕೊಡುಗೆಯಾಗಿ ನೀಡಲಿದ್ದಾರೆ.

 
ಹಿಮಸ್ಪೋಟದಿಂದಾಗಿ ನೂರಾರು ಜನ ನಾಪತ್ತೆಯಾಗಿದ್ದು, ಸಾವು ನೋವಿನ ಸಂಖ್ಯೆ ಏರುತ್ತಲೇ ಇದೆ. ಇದಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ರಿಷಬ್ ಚೆನ್ನೈ ಪಂದ್ಯದ ಸಂಭಾವನೆಯನ್ನು ರಕ್ಷಣಾ ಕೆಲಸ ಮತ್ತು ಸಂತ್ರಸ್ತರಿಗೆ ಕೊಡುಗೆಯಾಗಿ ನೀಡಲು ಬಯಸುವುದಾಗಿ ಟ್ವೀಟ್ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :