ಮುಂಬೈ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಕಳಪೆ ಆಟವಾಡಿ ಟೀಕೆಗೆ ಗುರಿಯಾಗುತ್ತಲೇ ಇರುತ್ತಾರೆ. ಈ ನಡುವೆ ಹೊಸ ವರ್ಷಾಚರಣೆಗೆಂದು ಗೆಳತಿ ಜತೆ ವಿದೇಶ ಪ್ರವಾಸ ಮಾಡಿರುವ ರಿಷಬ್ ಫೋಟೋ ಒಂದನ್ನು ಪ್ರಕಟಿಸಿದ್ದು, ಭಾರೀ ಟ್ರೋಲ್ ಗೊಳಗಾಗಿದ್ದಾರೆ.ಗೆಳತಿ ಇಶಾ ನೇಗಿ ಜತೆ ರೊಮ್ಯಾಂಟಿಕ್ ಕ್ಷಣದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ರಿಷಬ್ ಗೆ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಇಶಾ ಕೂಡಾ ಇದೇ ಫೋಟೋ ಪ್ರಕಟಿಸಿದ್ದು