ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ರಾಬಿನ್ ಉತ್ತಪ್ಪ ತಮ್ಮ ನಿಧಾನಗತಿಯ ಬ್ಯಾಟಿಂಗ್ ನಿಂದ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಪ್ಪ 16 ರನ್ ಗಳಿಸಲು ಬರೋಬ್ಬರಿ 27 ಎಸೆತ ಬಳಸಿಕೊಂಡರು. ಬಳಿಕ 47 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ರಾಬಿನ್ ರ ಈ ನಿಧಾನಗತಿಯ ಇನಿಂಗ್ಸ್ ನಿಂದ ಕೋಲ್ಕೊತ್ತಾ ಎದುರಾಳಿಗಳಿಗೆ ಗೆಲುವಿಗೆ ಕೇವಲ 134 ರನ್ ಗುರಿ ನೀಡಲಷ್ಟೇ ಶಕ್ತವಾಯಿತು.