ಮುಂಬೈ: ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಸಾವಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಮರಡೋನಾ ಸಾವಿಗೆ ಸಂತಾಪ ಸೂಚಿಸಿ ಸಂದೇಶ ಬರೆದಿರುವ ಗಂಗೂಲಿ ‘ನನ್ನ ಹೀರೋ ಇನ್ನಿಲ್ಲ ಎನ್ನುವುದನ್ನು ಸಹಿಸಲೂ ಆಗುತ್ತಿಲ್ಲ. ನನ್ನ ಫುಟ್ಬಾಲ್ ಹುಚ್ಚಿಗೆ ನೀವೇ ಕಾರಣರಾಗಿದ್ದಿರಿ. ನೀವಿಲ್ಲ ಎನ್ನುವುದನ್ನು ಹೇಗೆ ಅರಗಿಸಿಕೊಳ್ಳಲಿ?’ ಎಂದು ಅವರು ಕೋಲ್ಕೊತ್ತಾಗೆ ಬಂದಿದ್ದಾಗ ಅವರ ಜತೆಗೆ ತೆಗೆಸಿಕೊಂಡ ಫೋಟೋ ಪ್ರಕಟಿಸಿದ್ದಾರೆ.ಹಿಟ್