ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಶಬ್ನಂ ಗಿಲ್, ರಿಷಬ್ ಪಂತ್, ನವದೀಪ್ ಸೈನಿ ಮುಂತಾದವರು ಜೈವಿಕ ವಲಯದ ನಿಯಮಗಳನ್ನು ಮುರಿದು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆಯಷ್ಟೇ ಅಭಿಮಾನಿಯೊಬ್ಬರು ಈ ಕ್ರಿಕೆಟಿಗರು ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿರುವ ವಿಡಿಯೋ ಹಾಕಿದ್ದಲ್ಲದೆ, ಅವರ ಬಿಲ್ ನಾನು ಪಾವತಿಸಿದೆ ಎಂದು ಬರೆದುಕೊಂಡಿದ್ದರು. ಈ ವಿಚಾರವೇ ಈಗ ರೋಹಿತ್ ಮತ್ತು ಟೀಂಗೆ ಕಂಟಕವಾಗಿದೆ. ಇವರು ಜೈವಿಕ ವಲಯದ ನಿಯಮ ಮುರಿದು ಹೊರಗಡೆ ತೆರಳಿರುವ