ಸನತ್ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ

ಕಟಕ್| Krishnaveni K| Last Modified ಸೋಮವಾರ, 23 ಡಿಸೆಂಬರ್ 2019 (09:03 IST)
ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯರ 22 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ.

 
ಒಂದೇ ವರ್ಷದಲ್ಲಿ ಮೂರೂ ಮಾದರಿ ಕ್ರಿಕೆಟ್ ನಿಂದ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. 1997 ರಲ್ಲಿ ಜಯಸೂರ್ಯ ಒಂದೇ ವರ್ಷ 2387 ರನ್ ಗಳಿಸಿದ್ದರು.
 
ಆ ದಾಖಲೆಯನ್ನು ರೋಹಿತ್ ಈಗ ಅಳಿಸಿದ್ದಾರೆ. ಇದರ ಜತೆಗೆ ಈ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶಿಸಿದ ರೋಹಿತ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.
ಇದರಲ್ಲಿ ಇನ್ನಷ್ಟು ಓದಿ :