ರೋಹಿತ್ ಶರ್ಮಾ ಬಗ್ಗೆ ಹೀಗೊಂದು ಸುದ್ದಿ ಕೇಳಿಯೇ ಅಭಿಮಾನಿಗಳಲ್ಲಿ ಖುಷಿಯೋ ಖುಷಿ!

ಮುಂಬೈ| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (10:01 IST)
ಮುಂಬೈ: ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಸೀಮಿತ ಓವರ್ ಗಳ ಕ್ರಿಕೆಟ್ ಗೆ ಗುಡ್ ಬೈ ಹೇಳಲಿದ್ದು, ರೋಹಿತ್ ಶರ್ಮಾ ನೂತನ ನಾಯಕರಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 
ಹೀಗೊಂದು ಸುದ್ದಿ ಕೇಳಿಯೇ ಅಭಿಮಾನಿಗಳು ಖುಷಿಯಾಗಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಪ್ರತಿಷ್ಠಿತ ಟೂರ್ನಿಗಳಲ್ಲಿ ಜಾರಿ ಬೀಳುತ್ತಿರುವುದರಿಂದ ಬೇಸತ್ತಿದ್ದ ಅಭಿಮಾನಿಗಳು ರೋಹಿತ್ ಸೀಮಿತ ಓವರ್ ಗಳ ನಾಯಕರಾಗಬೇಕು ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಲೇ ಇದ್ದರು.
 
ಅದೀಗ ತಾನಾಗಿಯೇ ನೆರವೇರುತ್ತಿರುವ ಖುಷಿ ಅಭಿಮಾನಿಗಳದ್ದು. ಕೊಹ್ಲಿ ತಮ್ಮ ಬ್ಯಾಟಿಂಗ್ ಬಗ್ಗೆ ಗಮನ ಕೇಂದ್ರೀಕರಿಸಲಿ. ರೋಹಿತ್ ನಾಯಕರಾಗುವ ಕನಸು ನನಸಾಗುತ್ತಿದೆ ಎಂದರೆ ಅದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :