ಮುಂಬೈ: ಹಿಟ್ ಮ್ಯಾನ್ ರೋಹಿತ್ ಶರ್ಮಾ ಗಾಯದ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ ಗಳ ಪಂದ್ಯದಿಂದ ಹೊರ ನಡೆದಿರುವುದು, ಐಪಿಎಲ್ ನಲ್ಲಿ ಆಡಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು. ಇದೀಗ ಅವರ ಗಾಯದ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ಸ್ವಲ್ಪ ಸಮಸ್ಯೆ ಇರುವುದು ನಿಜ. ಅದಕ್ಕೆ ಪರಿಹಾರ ಪಡೆಯುತ್ತಿದ್ದೇನೆ. ಜನ ಏನು ಹೇಳ್ತಿದ್ದಾರೆ, ನನಗೆ ಏನಾಗುತ್ತಿದೆ ಎಂದು ನನಗೆ ಗೊತ್ತಿಲ್ಲ. ನಾನು ನಿರಂತರವಾಗಿ ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್