Widgets Magazine

ಮತ್ತೆ ಶುರುವಾಯ್ತು ಕೊಹ್ಲಿಗಿಂತ ರೋಹಿತ್ ಶರ್ಮಾನೇ ಬೆಸ್ಟ್ ಕ್ಯಾಪ್ಟನ್ ಎಂಬ ವರಸೆ

ಮುಂಬೈ| Krishnaveni K| Last Modified ಗುರುವಾರ, 16 ಮೇ 2019 (09:02 IST)
ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಮುಡಿಗೇರಿಸುವುದರೊಂದಿಗೆ ನಾಲ್ಕನೇ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕನಾಗಬೇಕು ಎಂಬ ಚರ್ಚೆ ಶುರುವಾಗಿದೆ.

 
ಕಳೆದೊಂದು ವರ್ಷದಿಂ ರೋಹಿತ್ ಶರ್ಮಾ ನಾಯಕತ್ವ ಮತ್ತು ವಿರಾಟ್ ಕೊಹ್ಲಿ ನಾಯಕತ್ವವನ್ನು ಹೋಲಿಕೆ ಮಾಡಲು ಆರಂಭಿಸಿರುವ ಕೆಲವರು ರೋಹಿತ್ ಶರ್ಮಾರೇ ಟೀಂ ಇಂಡಿಯಾ ನಾಯಕರಾದರೆ ಚೆನ್ನ ಎಂಬ ಅಭಿಪ್ರಾಯ ವ್ಯಕ್ತಪಡಿಸಲು ಶುರು ಮಾಡಿದ್ದರು.
 
ಇದೀಗ ಈ ವಾದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಚಾಲನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್ ‘ನನ್ನ ಪ್ರಕಾರ ರೋಹಿತ್ ಗೆ ಟೀಂ ಇಂಡಿಯಾ ಮುನ್ನಡೆಸುವ ಕ್ಷಮತೆಯಿದೆ. ಅವರು ನಾಲ್ಕು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂಬುದೊಂದೇ ಕಾರಣವಲ್ಲ. ಇದಕ್ಕೂ ಮೊದಲು ಟೀಂ ಇಂಡಿಯಾದಲ್ಲೂ ನಾಯಕರಾಗಿ ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ಪ್ರಕಾರ ಕೊಹ್ಲಿಯ ನಂತರದ ಸ್ಥಾನ ರೋಹಿತ್ ಗೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :