ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 91 ರನ್ ಗಳ ಅಮೂಲ್ಯ ಇನಿಂಗ್ಸ್ ಆಡಿ ಫಾರ್ಮ್ ಗೆ ಮರಳಿದ ಚೇತೇಶ್ವರ ಪೂಜಾರಗೆ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತಿದ್ದು ರೋಹಿತ್ ಶರ್ಮಾ ಎನ್ನಲಾಗಿದೆ. ಪೂಜಾರ ಬಗ್ಗೆ ಮಾತನಾಡಿದ್ದ ರೋಹಿತ್, ನಾವು ತಂಡದೊಳಗೆ ಯಾರೂ ಅವರು ರನ್ ಗಳಿಸುತ್ತಿಲ್ಲ ಎಂದು ಆಡಿಕೊಳ್ಳುತ್ತಿರಲಿಲ್ಲ. ಹೊರಗಿನವರು ಆಡಿಕೊಳ್ಳುತ್ತಿದ್ದರು. ಪೂಜಾರ ಎಂತಹ ಅಮೂಲ್ಯ ಆಟಗಾರ ಎಂದು ನಮಗೆ ಗೊತ್ತಿತ್ತು