ಕೋಲ್ಕೊತ್ತಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಯುವ ಕ್ರಿಕೆಟಿಗ ರವಿ ಬಿಷ್ಣೋಯ್ ಗೆ ಭರಪೂರ ಹೊಗಳಿಕೆಯ ಮಾತನಾಡಿದ್ದಾರೆ.ಚೊಚ್ಚಲ ಪಂದ್ಯದಲ್ಲೇ ಎರಡು ವಿಕೆಟ್ ಕಿತ್ತು ಮಿಂಚಿದ ರವಿ ಬಿಷ್ಣೋಯ್ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್ ಎಂದು ರೋಹಿತ್ ಶರ್ಮಾ ಪಂದ್ಯದ ಬಳಿಕ ಹೊಗಳಿದ್ದಾರೆ.ಈ ಬಾರಿ ಐಪಿಎಲ್ ನಲ್ಲೂ ರವಿ ಬಿಷ್ಣೋಯ್ ಉತ್ತಮ ಮೊತ್ತಕ್ಕೇ ಹರಾಜಾಗಿದ್ದರು.