ಲಂಡನ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವರ್ತನೆ ಎಲ್ಲರ ಹೃದಯ ಗೆದ್ದಿದೆ. ಮೈದಾನದಲ್ಲಿ ಭಾರತೀಯ ಆಟಗಾರರನ್ನು ಹುರಿದುಂಬಿಸಲು ಬಂದ 87 ವರ್ಷದ ಅಜ್ಜಿಯನ್ನು ಪಂದ್ಯ ಮುಗಿದ ಬಳಿಕ ಭೇಟಿಯಾದ ಈ ಇಬ್ಬರು ಕ್ರಿಕೆಟಿಗರು ಆಶೀರ್ವಾದ ಪಡೆದಿದ್ದರು. ಅಷ್ಟೇ ಅಲ್ಲದೆ, ರೋಹಿತ್ ಶರ್ಮಾ ಇನ್ನೊಂದು ಕಾರಣದಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದ