ಮುಂಬೈ: ವಿಶ್ವಕಪ್ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ಜೋರಾಗಿದೆ ಎಂಬ ವರದಿಗಳ ಬಗ್ಗೆ ಇದೀಗ ರೋಹಿತ್ ಶರ್ಮಾ ಬಾಯ್ಬಿಟ್ಟಿದ್ದಾರೆ.ಇದಕ್ಕೂ ಮೊದಲೇ ಕೊಹ್ಲಿ ಹಾಗೂ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇಂತಹ ವರದಿಗಳೆಲ್ಲಾ ಶುದ್ಧ ಆಧಾರ ರಹಿತ ಎಂದು ತಳ್ಳಿ ಹಾಕಿದ್ದರು. ಈಗ ರೋಹಿತ್ ಶರ್ಮಾ ಸಂದರ್ಶನವೊಂದದರಲ್ಲಿ ಇದರ ಬಗ್ಗೆ ಮಾತನಾಡಿದ್ದಾರೆ.ಈ ಮನಸ್ತಾಪದ ವರದಿ ನಡುವೆ ನನ್ನ ಕುಟುಂಬವನ್ನೂ ವಿವಾದಕ್ಕೆ ಎಳೆದುತರಲಾಯಿತು.