Widgets Magazine

ಮತ್ತೆ ಕ್ರಿಕೆಟ್ ಅಂಗಣಕ್ಕಿಳಿದ ರೋಹಿತ್ ಶರ್ಮಾ

ಮುಂಬೈ| Krishnaveni K| Last Modified ಗುರುವಾರ, 25 ಜೂನ್ 2020 (09:35 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕಳೆದ ಮೂರು ತಿಂಗಳಿನಿಂದ ಕ್ರಿಕೆಟ್ ಬಿಡಿ ಮೈದಾನದಲ್ಲಿ ಅಭ್ಯಾಸ ಮಾಡಲೂ ಆಗದ ಸ್ಥಿತಿ ಕ್ರಿಕೆಟಿಗರದ್ದಾಗಿದೆ. ಈ ನಡುವೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಹಲವು ದಿನಗಳ ಬಳಿಕ ಮೈದಾನಕ್ಕಿಳಿದ ಖುಷಿಯಲ್ಲಿದ್ದಾರೆ.

 

ಹಲವು ದಿನಗಳ ಬಳಿಕ ತಮ್ಮ ನಿವಾಸದ ಬಳಿಯ ಮೈದಾನದಲ್ಲಿ ವರ್ಕೌಟ್ ಮಾಡಲಿಳಿದಿ ರೋಹಿತ್ ಶರ್ಮಾ ಆ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
 
ಮತ್ತೆ ಹೊಸದಾಗಿ ಕ್ರಿಕೆಟ್ ಆರಂಭಿಸಿದ ಹಾಗನಿಸುತ್ತಿದೆ ಎಂದು ರೋಹಿತ್ ಬರೆದುಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಆಟಗಾರರಿಗೆ ಒಟ್ಟಾಗಿ ತರಬೇತಿ ಆರಂಭಿಸಲು ಕೊರೋನಾ ಕಾರಣದಿಂದ ಬಿಸಿಸಿಐ ಹಿಂದೇಟು ಹಾಕುತ್ತಿದೆ. ಈಗಾಗಲೇ ಪಾಕ್ ಕ್ರಿಕೆಟಿಗರು ಸಾಮೂಹಿಕವಾಗಿ ಕೊರೋನಾಗೆ ತುತ್ತಾಗಿರುವುದು ಇತರ ಕ್ರಿಕೆಟ್ ಮಂಡಳಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :