ರಾಂಚಿ: ಟೀಂ ಇಂಡಿಯಾದಲ್ಲಿ ಟೆಸ್ಟ್ ಆರಂಭಿಕರಾಗಿ ಕಣಕ್ಕಿಳಿದು ಮೂರೇ ಪಂದ್ಯಗಳಲ್ಲಿ ರೋಹಿತ್ ಈಗ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.ದ್ವಿತೀಯ ದಿನ ಟೆಸ್ಟ್ ಕೆರಿಯರನ್ ನ ಮೊದಲ ದ್ವಿಶತಕ ಭಾರಿಸಿದ ರೋಹಿತ್ ಈ ಸರಣಿಯಲ್ಲಿ ತಮ್ಮ ರನ್ ಹೊಳೆ ಮುಂದುವರಿಸಿದ್ದಾರೆ. ಜತೆಗೆ ಮೊದಲ ದಿನದ ತಮ್ಮ ಕೆಲವು ದಾಖಲೆಗಳಿಗೆ ಮತ್ತಷ್ಟು ಹೊಸ ದಾಖಲೆಗಳನ್ನು ಸೇರ್ಪಡೆಗೊಳಿಸಿದ್ದಾರೆ.ಏಕದಿನ ಪಂದ್ಯಗಳಲ್ಲೂ ಎರಡೆರಡು ಬಾರಿ ದ್ವಿಶತಕ ಗಳಿಸಿರುವ ರೋಹಿತ್ ಈ ಮೂಲಕ ಟೆಸ್ಟ್ ಮತ್ತು ಏಕದಿನ