Widgets Magazine

ರೋಹಿತ್ ಶರ್ಮಾ ಈಗ ಸಿಕ್ಸರ್ ಕಿಂಗ್!

ರಾಜ್ ಕೋಟ್| Krishnaveni K| Last Modified ಶುಕ್ರವಾರ, 8 ನವೆಂಬರ್ 2019 (09:56 IST)
ರಾಜ್ ಕೋಟ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಸಿಕ್ಸರ್ ಗಳ ಮೂಲಕ ದಾಖಲೆಯೊಂದನ್ನು ಮಾಡಿದ್ದಾರೆ.
 

43 ಬಾಲ್ ಗಳಲ್ಲಿ 85 ರನ್ ಗಳಿಸಿದ್ದ ರೋಹಿತ್ ಈ ಹೊಡೆಬಡಿಯ ಇನಿಂಗ್ಸ್ ನಲ್ಲಿ  ಭರ್ಜರಿ 6 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಭಾರತೀಯ ನಾಯಕನೊಬ್ಬ ಟಿ20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದರು. ನಾಯಕನಾಗಿ 17 ಇನಿಂಗ್ಸ್ ಗಳಿಂದ ರೋಹಿತ್ 37 ಸಿಕ್ಸರ್ ಸಿಡಿಸಿದ್ದಾರೆ.
 
ಅಷ್ಟೇ ಅಲ್ಲ, 2019 ರ ಸಾಲಿನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ ಮಾಡಿದರು. ಈ ವರ್ಷ ಅವರು ಎಲ್ಲಾ ಫಾರ್ಮ್ಯಾಟ್ ನಲ್ಲಿ ಒಟ್ಟು 66 ಸಿಕ್ಸರ್ ಸಿಡಿಸಿದ್ದಾರೆ. ಇದು ರೋಹಿತ್ ಪಾಲಿಗೆ 100 ನೇ ಟಿ20 ಪಂದ್ಯವಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :