ಲಂಡನ್: ಟೀಂ ಇಂಡಿಯಾ ಏಕದಿನ ಪಂದ್ಯಗಳಲ್ಲಿ ಎದುರಾಳಿಗಳಿಗೂ ಚಳಿ ಹಿಡಿಸುವ ಆರಂಭಿಕ ಆಟಗಾರ ರೋಹಿತ್ ಶರ್ಮಾ. ಆದರೆ ಇವರು ಓಪನರ್ ಆದ ಕತೆ ಏನು ಗೊತ್ತಾ?ಇದನ್ನು ಸ್ವತಃ ರೋಹಿತ್ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಧೋನಿ ತಮ್ಮನ್ನು ರಾತ್ರೋ ರಾತ್ರಿ ಅದೂ ಚಾಂಪಿಯನ್ ಟ್ರೋಫಿ ಪಂದ್ಯಾವಳಿ ಸಂದರ್ಭ ಆರಂಭಿಕರಾಗಿ ಮಾಡಿದರು ಎಂದು ರೋಹಿತ್ ಹೇಳಿಕೊಂಡಿದ್ದಾರೆ.ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಮೊದಲ ಪಂದ್ಯದ ಹಿಂದಿನ ದಿನ ರಾತ್ರಿ ನನ್ನಲ್ಲಿ ಧೋನಿ ಏಕಾಏಕಿ ನಾಳೆ ನೀನೇ