ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬೇಜವಾಬ್ಧಾರಿಯುತ ಶಾಟ್ ಬಾರಿಸಲು ಹೋಗಿ ಔಟಾಗಿದ್ದಕ್ಕೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದರು. ಆದರೆ ಈ ಹೊಡೆತದ ಬಗ್ಗೆ ರೋಹಿತ್ ದಿನದಾಟದ ನಂತರ ಪ್ರತಿಕ್ರಿಯಿಸಿದ್ದಾರೆ.44 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ನಥನ್ ಲಿಯೋನ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆಗಿದ್ದರು. ರೋಹಿತ್ ರಂತಹ ಅನುಭವಿ ಆಟಗಾರ ಇಂತಹ ಸಂದರ್ಭದಲ್ಲಿ ಜವಾಬ್ಧಾರಿಯುತ ಇನಿಂಗ್ಸ್ ಆಡಬೇಕಿತ್ತು ಎಂದು