ಮುಂಬೈ: ಇತ್ತೀಚೆಗೆ ಐಪಿಎಲ್ ನಲ್ಲಿ ರೋಹಿತ್ ಶರ್ಮಾರನ್ನು ನೋಡಿದ ಮೇಲೆ ಕೆಲವರು ಅವರ ದೇಹ ತೂಕದ ಬಗ್ಗೆ ತಮಾಷೆ ಮಾಡಿದ್ದಾರೆ. ಸ್ವಲ್ಪ ಹೆಚ್ಚೇ ಎನ್ನುವಷ್ಟು ದೇಹ ತೂಕ ಮಾಡಿಕೊಂಡಿದ್ದ ರೋಹಿತ್ ಈಗ ತೆಳ್ಳಗಾಗಲು ವರ್ಕೌಟ್ ಮಾಡುತ್ತಿದ್ದಾರೆ. ಬೆಂಗಳೂರಿನ ಎನ್ ಸಿಎಯಲ್ಲಿ ಮಂಡಿರಜ್ಜು ಗಾಯ ವಾಸಿಯಾಗಲು ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರೋಹಿತ್ ಬಹುತೇಕ ಚೇತರಿಸಿಕೊಂಡಿದ್ದಾರೆ. ಆದರೆ ಇದರ ಜತೆಗೆ ರೋಹಿತ್ ಈಗ ತಮ್ಮ ದೇಹ ತೂಕ ಇಳಿಸಿಕೊಳ್ಳಲು ಶ್ರಮವಹಿಸುತ್ತಿದ್ದಾರೆ. ತಮ್ಮ ಫೋಟೋಗಳನ್ನು