ರಿಷಬ್ ಪಂತ್ ಹೋಟೆಲ್ ರೂಂ ಅವಸ್ಥೆ ತೋರಿಸಿದ ರೋಹಿತ್ ಶರ್ಮಾ!

ಸಿಡ್ನಿ| Krishnaveni K| Last Modified ಮಂಗಳವಾರ, 12 ಜನವರಿ 2021 (10:20 IST)
ಸಿಡ್ನಿ: ಮೂರನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಡ್ರಾ ಮಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಹೋಟೆಲ್ ಕೊಠಡಿಯನ್ನು ಹೇಗೆ ಇಟ್ಟುಕೊಳ್ಳುತ್ತಾರೆಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.

 
ರಿಷಬ್ ಹೋಟೆಲ್ ಕೊಠಡಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ರೋಹಿತ್ ‘ನೋಡಿ ಲೆಜೆಂಡ್ ರಿಷಬ್ ಪಂತ್ ರೂಂ ಹೀಗಿದೆ’ ಎಂದು ತಮಾಷೆ ಮಾಡಿದ್ದಾರೆ. ರಿಷಬ್ ಕೊಠಡಿ ತುಂಬಾ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪಕ್ಕಾ ಬ್ರಹ್ಮಚಾರಿಗಳ ಕೊಠಡಿ ಹೇಗಿರುತ್ತದೋ ಹಾಗಿದೆ. ಅಲ್ಲಲ್ಲಿ ಎಸೆದ ಶೂ, ಜೆರ್ಸಿ, ಕವರ್ ಎಲ್ಲಾ ತೋರಿಸಿ ರೋಹಿತ್ ಸಹ ಆಟಗಾರನ ಕಾಲೆಳೆದಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :