Widgets Magazine

ಟೀಂ ಇಂಡಿಯಾ ಬಸ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮೂಕಾಭಿನಯ

ಲಂಡನ್| Krishnaveni K| Last Modified ಮಂಗಳವಾರ, 25 ಜೂನ್ 2019 (09:36 IST)
ಲಂಡನ್: ಮೂಕಾಭಿನಯ ಮಾಡಿ ಅದೇನೆಂದು ಪತ್ತೆ ಮಾಡುವ ಆಟವನ್ನು ನಾವು ಎಷ್ಟು ಬಾರಿ ಆಡಿಲ್ಲ ಹೇಳಿ? ಅದೇ ಆಟವನ್ನು ಇದೀಗ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಟೀಂ ಬಸ್ ನಲ್ಲಿ ಆಡಿ ಮನರಂಜನೆ ನೀಡಿದ್ದಾರೆ.

 

ಮ್ಯಾಂಚೆಸ್ಟರ್ ನಲ್ಲಿ ನಾಳೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ತಂಡದ ಸಹ ಆಟಗಾರರೊಂದಿಗೆ ಬಸ್ ಪ್ರಯಾಣ ಮಾಡುವಾಗ ರೋಹಿತ್ ಶರ್ಮಾ ಟೈಮ್ ಪಾಸ್ ಗಾಗಿ ದಿನೇಶ್ ಕಾರ್ತಿಕ್, ಕೋಚ್ ಆರ್ ಶ್ರೀಧರ್ ಜತೆಗೂಡಿ ಈ ಆಟ ಆಡಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಕೂಡಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮ್ಯಾಂಚೆಸ್ಟರ್ ಗೆ ಸಾಗುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ನಾಳೆಯ ಪಂದ್ಯಕ್ಕೆ ಟೀಂ ಇಂಡಿಯಾ ನಿನ್ನೆಯೇ ಮ್ಯಾಂಚೆಸ್ಟರ್ ಗೆ ಬಂದು ತಲುಪಿದೆ.ಇದರಲ್ಲಿ ಇನ್ನಷ್ಟು ಓದಿ :