ಸಿಡ್ನಿ: ಆಸ್ಟ್ರೇಲಿಯಾ ಸರಣಿಯಲ್ಲಿ ಪಾಲ್ಗೊಳ್ಳಲು ಸಿಡ್ನಿಗೆ ಬಂದಿಳಿದಿರುವ ರೋಹಿತ್ ಶರ್ಮಾ ಸದ್ಯಕ್ಕೆ ಇಲ್ಲಿ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ. ಈ ನಡುವೆ ಇಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಮೆಲ್ಬೋರ್ನ್ ನಲ್ಲಿ ಅವರು ಮತ್ತೆ ಕ್ವಾರಂಟೈನ್ ಗೊಳಗಾಗಲಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.