Widgets Magazine

ಚೇತೇಶ್ವರ ಪೂಜಾರ ಮೇಲೆ ಹರಿಹಾಯ್ದು ಟ್ರೋಲ್ ಗೊಳಗಾದ ರೋಹಿತ್ ಶರ್ಮಾ

ವಿಶಾಖಪಟ್ಟಣ| Krishnaveni K| Last Modified ಭಾನುವಾರ, 6 ಅಕ್ಟೋಬರ್ 2019 (05:44 IST)
ವಿಶಾಖಪಟ್ಟಣ: ಸಾಮಾನ್ಯವಾಗಿ ಟೀಂ ಇಂಡಿಯಾದಲ್ಲಿ ಮೈದಾನದಲ್ಲೇ ಕೂಗಾಡುವ ಸ್ವಭಾವವಿರುವ ಕ್ರಿಕೆಟಿಗ ಎಂದರೆ ವಿರಾಟ್ ಕೊಹ್ಲಿಯದ್ದು. ಆದರೆ ಈ ಬಾರಿ ರೋಹಿತ್ ಶರ್ಮಾ ಸಹ ಆಟಗಾರನ ಮೇಲೆ ಕೂಗಾಡಿ ಟ್ರೋಲ್ ಗೊಳಗಾಗಿದ್ದಾರೆ.

 
ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ವೇಗವಾಗಿ ರನ್ ಕಲೆ ಹಾಕಲು ಒತ್ತು ನೀಡಿತ್ತು. ಈ ನಡುವೆ ರೋಹಿತ್ ಶರ್ಮಾ ಮತ್ತು ಬ್ಯಾಟಿಂಗ್ ಮಾಡುತ್ತಿದ್ದರು.
 
ಹೇಳಿ ಕೇಳಿ ರೋಹಿತ್ ಪಕ್ಕಾ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುವ ಆಟಗಾರನಾದರೆ ಪೂಜಾರಾ ತೀರಾ ಟೆಸ್ಟ್ ಶೈಲಿಯಲ್ಲೇ ನಿಧಾನಗತಿಯಲ್ಲಿ ಬ್ಯಾಟ್ ಮಾಡುತ್ತಾರೆ. ಈ ನಡುವೆ ಸಿಂಗಲ್ಸ್ ತೆಗೆಯುವ ಅವಕಾಶವಿದ್ದರೂ ಓಡದ ಪೂಜಾರ ಮೇಲೆ ಸಿಟ್ಟಿಗೆದ್ದ ರೋಹಿತ್ ‘ಪೂಜಿ ಓಡು’ ಎಂದು ಕೂಗಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಟ್ವಿಟರಿಗರು ನಾನಾ ಮೆಮೆಗಳ ಮೂಲಕ ಅಂತೂ ರೋಹಿತ್, ವಿರಾಟ್ ರ ಸ್ನೇಹಿತರಾದರು ಎಂದಿದ್ದಾರೆ. ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಕೂಡಾ ಈ ಘಟನೆಯನ್ನು ತಮಾಷೆ ಮಾಡಿದ್ದು, ‘ನೋಡಿ ಈ ಬಾರಿ ಕೂಗಾಡಿದ್ದು ರೋಹಿತ್, ವಿರಾಟ್ ಅಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :