ವಿರಾಟ್ ಕೊಹ್ಲಿ ಜತೆಗಿನ ವೈಮನಸ್ಯದ ರೂಮರ್ ಗೆ ತಕ್ಕ ಉತ್ತರ ಕೊಟ್ಟ ರೋಹಿತ್ ಶರ್ಮಾ

ಮುಂಬೈ| Krishnaveni K| Last Modified ಗುರುವಾರ, 1 ಆಗಸ್ಟ್ 2019 (10:24 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೆ ತಮಗೆ ವೈಮನಸ್ಯವಿದೆ ಎಂಬ ಸುದ್ದಿಗಳಿಗೆ ರೋಹಿತ್ ಶರ್ಮಾ ತಕ್ಕ ಉತ್ತರ ಕೊಟ್ಟಿದ್ದಾರೆ.
 

ವೆಸ್ಟ್ ಇಂಡೀಸ್ ಗೆ ತೆರಳುವ ಮುನ್ನ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಇದೆಲ್ಲಾ ಸುಳ್ಳು ಸುದ್ದಿ ಎಂದು ನಿರಾಕರಿಸಿದ್ದರು. ಆದರೆ ಈಗ ರೋಹಿತ್ ಮಾಡಿರುವ ಟ್ವೀಟ್ ನೋಡಿದರೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ.
 
ಮೈದಾನಕ್ಕೆ ಬ್ಯಾಟಿಂಗ್ ಗೆ ಇಳಿದುಬರುತ್ತಿರುವ ಫೋಟೋ ಪ್ರಕಟಿಸಿರುವ ರೋಹಿತ್ ‘ನಾನು ಕೇವಲ ತಂಡಕ್ಕಾಗಿ ವಿದೇಶಕ್ಕೆ ಹೋಗುತ್ತಿಲ್ಲ, ನನ್ನ ದೇಶಕ್ಕಾಗಿ ಹೋಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಾನು ಆಡುವುದು ಕೇವಲ ತನ್ನ ತಂಡಕ್ಕಾಗಿ ಅಲ್ಲ ಎಂದು ಸಂದೇಶ ನೀಡಿದ್ದಾರೆ. ಇದು ಕೊಹ್ಲಿ ಜತೆಗಿನ ವೈಮನಸ್ಯದ ಸುದ್ದಿಗೆ ರೋಹಿತ್ ಕೊಟ್ಟ ಉತ್ತರ ಎಂದೇ ಬಣ್ಣಿಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :