ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಗಾಸಿಪ್ ಗಳಿಗೆ ಪುಷ್ಠಿ ಸಿಕ್ಕಿದೆ.ಇದೀಗ ಟೆಸ್ಟ್ ತಂಡಕ್ಕೆ ಆಯ್ಕೆಯಾಗದ ನಿರಾಸೆಯಲ್ಲಿರುವ ರೋಹಿತ್ ಶರ್ಮಾ ತಮ್ಮ ಟ್ವಿಟರ್ ಖಾತೆಯಿಂದ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದಾರೆ. ಟ್ವಿಟರ್ ಅಷ್ಟೇ ಅಲ್ಲದೆ, ಇನ್ ಸ್ಟಾಗ್ರಾಂನಲ್ಲೂ ಕೊಹ್ಲಿಯನ್ನು ರೋಹಿತ್ ಹೊರಗಿಟ್ಟಿದ್ದಾರೆ.ಇದು ಈ ಇಬ್ಬರೂ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗೆ ಪುಕ್ಕ ನೀಡಿದೆ.