ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮಾತುಕತೆಯೇ ಇಲ್ಲ? ಇಂತಹದ್ದೊಂದು ಅನುಮಾನಕ್ಕೆ ಪುಷ್ಠಿ ನೀಡುವ ಹಲವು ಅಂಶಗಳನ್ನು ನಾವು ನೋಡಬಹುದು. ವಿರಾಟ್ ಕೊಹ್ಲಿ ರೋಹಿತ್ ಆರೋಗ್ಯದ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಅಂದರೆ ನಾಯಕನಾಗಿ ಕೊಹ್ಲಿ ರೋಹಿತ್ ಜತೆ ನೇರವಾಗಿ ಮಾತುಕತೆಯೇ ನಡೆಸಿಲ್ಲ ಎಂದರ್ಥ. ಎಲ್ಲದಕ್ಕೂ ಕೊಹ್ಲಿ ಬಿಸಿಸಿಐ ಹೇಳಿಕೆಯನ್ನೇ ಅವಲಂಬಿಸಿದ್ದಾರೆ. ಅಂದರೆ 10 ವರ್ಷದಿಂದ ಜತೆಯಾಗಿ ಆಡುತ್ತಿರುವ ತಂಡದ ಹಿರಿಯ