ಕೊಲೊಂಬೊ: ಟೆಸ್ಟ್ ಸರಣಿಯಲ್ಲಿ ಆಡುವ ಬಳಗದಲ್ಲಿ ಅವಕಾಶ ಸಿಗದೇ ಬೆಂಚ್ ಕಾಯಿಸಿದ್ದ ರೋಹಿತ್ ಶರ್ಮಾಗೆ ಏಕದಿನ ಸರಣಿಗೆ ಉಪನಾಯಕನಾಗುವ ಅವಕಾಶ ಸಿಕ್ಕಿದೆ. ಇದೇ ಅಲ್ವೇ ಅದೃಷ್ಟ ಎಂದರೆ? ಈ ಬಗ್ಗೆ ಸುದ್ದಿಗಾರರು ರೋಹಿತ್ ಶರ್ಮಾ ಅವರನ್ನು ಕೇಳಿದಾಗ, ನಾನು ಉಪನಾಯಕತ್ವದ ಬಗ್ಗೆಯಾಗಲೀ, ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ಸಿಕ್ಕದ ಬಗ್ಗೆಯಾಗಲೀ ಚಿಂತೆ ಮಾಡುತ್ತಿಲ್ಲ ಎಂದಿದ್ದಾರೆ.ನನ್ನ ಗಮನವೇನಿದ್ದರೂ ಏಕದಿನ ಸರಣಿ ಮೇಲೆ ಇರುತ್ತದೆ. ಉಪನಾಯಕನಾಗುವುದು ನಿಜಕ್ಕೂ ದೊಡ್ಡ ಗೌರವ. ಇದು