ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಊಹಿಸಲೂ ಆಗದ ಶಾಕ್!

ಕೇಪ್ ಟೌನ್| Krishnaveni| Last Modified ಮಂಗಳವಾರ, 9 ಜನವರಿ 2018 (09:29 IST)
ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲೇ ಸೋತು ಮುಖಭಂಗ ಅನುಭವಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದಕ್ಕೆಲ್ಲಾ ಬ್ಯಾಟ್ಸ್ ಮನ್ ಗಳ ವೈಫಲ್ಯವೇ ಕಾರಣ ಎಂದಿದ್ದಾರೆ.

ಮದುವೆ ಮುಗಿಸಿ ಪತ್ನಿ ಅನುಷ್ಕಾ ಜತೆ ಹನಿಮೂನ್ ಮೂಡ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಈ ಸೋಲು ನಿಜಕ್ಕೂ ನುಂಗಲಾರದ ಬಿಸಿ ತುಪ್ಪವಾಗಿದೆ. ಇದುವರೆಗಿನ ಯಶಸ್ಸಿನ ಗುಂಗಿನಲ್ಲಿ ಸರಣಿಗೆ ಅಭ್ಯಾಸ ನಡೆಸುವುದನ್ನೂ ಬಿಟ್ಟು ಊರು ಸುತ್ತುತ್ತಿದ್ದ ಕೊಹ್ಲಿ ಮತ್ತು ಇತರ ಕ್ರಿಕೆಟಿಗರು ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸದೇ ಇದ್ದಿದ್ದಕ್ಕೆ ಬೆಲೆ ತೆತ್ತಿದ್ದಾರೆ.ಪಂದ್ಯದ ನಂತರ ಸೋಲಿನ ವಿಶ್ಲೇಷಣೆ ನಡೆಸಿದ ಕೊಹ್ಲಿ ‘ನಮ್ಮ ಬೌಲರ್ ಗಳು 20 ವಿಕೆಟ್ ಕಿತ್ತು ಉತ್ತಮ ಕೆಲಸವನ್ನೇ ಮಾಡಿದ್ದರು. ಆದರೆ ಅವರು ನಿರ್ಮಿಸಿದ ವೇದಿಕೆಯನ್ನು ಸರಿಯಾಗಿ ನಿಭಾಯಿಸಲು ಬ್ಯಾಟ್ಸ್ ಮನ್ ಗಳು ಎಡವಿದರೆ ಬೌಲರ್ ಗಳು ಎಷ್ಟು ಶ್ರಮವಹಿಸಿದರೂ ಬೆಲೆಯಿಲ್ಲ’ ಎಂದು ಕೊಹ್ಲಿ ತಮ್ಮನ್ನು ತಾವೇ ಹಳಿದುಕೊಂಡಿದ್ದಾರೆ.

ಈ ಪಂದ್ಯದಲ್ಲಿ ವಿಫಲವಾಗಿದ್ದಕ್ಕೆ ಕೊಹ್ಲಿ ಮೇಲೆ ಅಭಿಮಾನಿಗಳು ಗರಂ ಆಗಿದ್ದರು. ಜತೆಗೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೇಲೂ ಕಿಡಿ ಕಾರಿದ್ದರು. ಪಂದ್ಯದ ನಂತರ ಟೀಂ ಇಂಡಿಯಾದ ಎಲ್ಲಾ ವೇಗಿಗಳನ್ನು ಪ್ರಶಂಸಿಸಿದ ಕೊಹ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಹಳಿದುಕೊಂಡರು. ಈ ಸೋಲಿನ ನೋವನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಪತ್ನಿಯರ ಜತೆ ಊರು ಸುತ್ತುವುದನ್ನು ಬಿಟ್ಟು ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸುತ್ತಾರಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :