ಶಿಖರ್ ಧವನ್ ರನ್ನು ಮಂಕಡ್ ಔಟ್ ಮಾಡಲು ಯತ್ನಿಸಿದ ದ.ಆಫ್ರಿಕಾ ವೇಗಿ

ಲಂಡನ್| Krishnaveni K| Last Modified ಗುರುವಾರ, 6 ಜೂನ್ 2019 (10:21 IST)
ಲಂಡನ್: ರ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ರನ್ನು ಆಫ್ರಿಕಾ ವೇಗಿ ಕ್ರಿಸ್ ಮಾರಿಸ್ ಮಂಕಡ್ ಔಟ್ ಮಾಡಲು ಯತ್ನಿಸಿದ ಫನ್ನಿ ಘಟನೆ ನಡೆದಿದೆ.

 
ಮೂರನೇ ಓವರ್ ನಲ್ಲಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಧವನ್ ಕ್ರೀಸ್ ಬಿಟ್ಟು ಕೂದಲೆಳೆಯಷ್ಟು ದೂರದಲ್ಲಿದ್ದರು. ಆಗ ತಮ್ಮ ಬೌಲಿಂಗ್ ಮಾರ್ಕ್ ನತ್ತ ತೆರಳುತ್ತಿದ್ದ ಕ್ರಿಸ್ ಮಾರಿಸ್ ವಿಕೆಟ್ ಗೆ ಚೆಂಡು ತಗುಲಿಸಿ ಮಂಕಡ್ ಔಟ್ ಮಾಡಲು ಯತ್ನಿಸಿದರು.
 
ಆದರೆ ಧವನ್ ತಕ್ಷಣ ಕ್ರೀಸ್ ನೊಳಗೆ ಬಂದಿದ್ದರು. ಇತ್ತ ಮಾರಿಸ್ ನಗುತ್ತಲೇ ತಮ್ಮ ಬೌಲಿಂಗ್ ಮಾರ್ಕ್ ನತ್ತ ತೆರಳಿದರು. ಈ ಬಾರಿ ಐಪಿಎಲ್ ಪಂದ್ಯದ ವೇಳೆ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ನ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :