ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಹಾಟ್ ಫೇವರಿಟ್ ಆರಂಭಿಕ ಜೋಡಿ. ಇವರಿಬ್ಬರು ಸೇರಿಕೊಂಡು ವಿಶ್ವದ ಬೌಲರ್ ಗಳನ್ನೇ ನಿದ್ದೆಗೆಡಿಸುತ್ತಿದ್ದರು. ಇಂತಿಪ್ಪ ಸೆಹ್ವಾಗ್ ಜನ್ಮ ದಿನದಂದು ಸಚಿನ್ ಅವರನ್ನು ಪ್ರೀತಿಯಿಂದ ಆಕ್ಷೇಪಿಸಿದ್ದಾರೆ. ಈ ಸಂದರ್ಭದಲ್ಲಿ ಸೆಹ್ವಾಗ್ ಗೆ ಶುಭಾಷಯ ಕೋರಿದ ಸಚಿನ್ ನೀನು ಯಾವತ್ತೂ ನಾನು ಏನು ಹೇಳುತ್ತೇನೋ ಅದಕ್ಕೆ ತದ್ವಿರುದ್ದವೇ ಮಾಡುತ್ತಿದ್ದೆ ಎಂದು ತಮಾಷೆ ಮಾಡಿದ್ದಾರೆ.ಹ್ಯಾಪಿ ಬರ್ತ್ ಡೇ ವೀರೂ.