ಕೊರೋನಾ ಪೀಡಿತ ಸಚಿನ್ ತೆಂಡುಲ್ಕರ್ ಆಸ್ಪತ್ರೆಗೆ ದಾಖಲು

ಮುಂಬೈ| Krishnaveni K| Last Modified ಶುಕ್ರವಾರ, 2 ಏಪ್ರಿಲ್ 2021 (11:06 IST)
ಮುಂಬೈ: ಕೊರೋನಾದಿಂದ ಬಳಲುತ್ತಿರುವ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಸಚಿನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 > ರೋಡ್ ಸೇಫ್ಟೀ ಟೂರ್ನಮೆಂಟ್ ಆಡಿದ್ದ ಸಚಿನ್ ಸೇರಿದಂತೆ ನಾಲ್ವರು ಕ್ರಿಕೆಟಿಗರಿಗೆ ಕೊರೋನಾ ತಗುಲಿತ್ತು. ಮಾರ್ಚ್ 27 ರಂದು ಸಚಿನ್ ಸಣ್ಣ ಪ್ರಮಾಣದ ಕೊರೋನಾ ಲಕ್ಷಣಗಳಿದ್ದು, ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ಹೇಳಿದ್ದರು.>   ಇದೀಗ ಆರೋಗ್ಯದಲ್ಲಿ ಸುಧಾರಣೆಯಾಗದ ಕಾರಣ ಸಚಿನ್ ಗೆ ವೈದ್ಯರು ಆಸ್ಪತ್ರೆಗೆ ದಾಖಲಾಗಲು ಸಲಹೆ ನೀಡಿದ್ದಾರೆ. ಅದರಂತೆ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿನ್ ಜೊತೆ ಆಡಿದ್ದ ಕ್ರಿಕೆಟಿಗ ಯೂಸುಫ್ ಪಠಾಣ್, ಸಹೋದರ ಇರ್ಫಾನ್ ಪಠಾಣ್, ಎಸ್ ಬದರೀನಾಥ್ ಗೂ ಕೊರೋನಾ ಸೋಂಕು ತಗುಲಿತ್ತು. ಅವರೆಲ್ಲರೂ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :