ಮುಂಬೈ: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ಹೊರಟಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅತ್ಯುತ್ತಮ ಸಲಹೆ ನೀಡಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿರುವ ಸಚಿನ್ ತೆಂಡುಲ್ಕರ್ ಇಲ್ಲಿ ಆಡುವಾಗ ಕ್ರಿಕೆಟಿಗರು ಮುಂಗಾಲಿನ ಚಲನೆ ಮುಖ್ಯವಾಗುತ್ತದೆ ಎಂದಿದ್ದಾರೆ.‘ಫ್ರಂಟ್ ಫೂಟ್ ಡಿಫೆನ್ಸ್ ತುಂಬಾ ಮುಖ್ಯ. ನೀವು ಎಷ್ಟು ಚೆನ್ನಾಗಿ ಮುಂಗಾಲಿನ ಚಲನೆ ಮಾಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತತದೆ. ಮೊದಲ 25 ಓವರ್ ಗಳನ್ನು ಬ್ಯಾಟ್ಸ್ ಮನ್ ಇದಕ್ಕೇ ಪ್ರಾಶಸ್ತ್ಯ ನೀಡಬೇಕು.