ಮುಂಬೈ: ಸ್ವಚ್ಛ್ ಹೀ ಸೇವಾ ಎಂಬ ಅಭಿಯಾನ ಆರಂಭಿಸಿರುವ ಪ್ರಧಾನಿ ಮೋದಿ ದೇಶದ ಹಲವು ಸೆಲೆಬ್ರಿಟಿಗಳಿಗೆ ಪತ್ರ ಬರೆದು ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸುವಂತೆ ಕೇಳಿಕೊಂಡಿದ್ದರು. ಅದಕ್ಕೀಗ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಪ್ರಧಾನಿ ಕರೆಗೆ ಓಗೊಟ್ಟ ಸಚಿನ್ ಮುಂಬೈಯ ಕೊಳಗೇರಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸ್ವತಃ ಗ್ಲೌಸ್ ಹಾಕಿಕೊಂಡು ಕಸ, ಕೊಳಚೆ ಕ್ಲೀನ್ ಮಾಡಲು ಮುಂದಾಗಿದ್ದಾರೆ.ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಮತ್ತು ತಂಡದವರೊಂದಿಗೆ ಸಚಿನ್ ಸ್ವಚ್ಛತೆ