ಇಂಡಿಯನ್ ಐಡಲ್ ಶೋಗೆ ಹೋಗಿ ಟೀಕೆಗೊಳಗಾದ ಸಚಿನ್ ತೆಂಡುಲ್ಕರ್

ಮುಂಬೈ, ಶನಿವಾರ, 2 ನವೆಂಬರ್ 2019 (08:13 IST)

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಲ್ಲದೆ ಶೋ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದಕ್ಕೆ ಟೀಕೆಗೊಳಗಾಗಿದ್ದಾರೆ.


 
ಅಷ್ಟಕ್ಕೂ ಸಚಿನ್ ಇಂತಹದ್ದೊಂದು ಹಾಡಿನ ಶೋನಲ್ಲಿ ಭಾಗವಹಿಸಿದ್ದಕ್ಕೆ ಟೀಕೆಗೊಳಗಾಗಿದ್ದು ಯಾಕೆ ಗೊತ್ತಾ? ಈ ಶೋನಲ್ಲಿ ತೀರ್ಪುಗಾರರಾಗಿ ಅನು ಮಲಿಕ್ ಇದ್ದಾರೆ. ಅವರು ಹಿಂದೆ ಮೀ ಟೂ ಅಭಿನಯಾನದಡಿಯಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೊಳಗಾದವರು.
 
ಹಲವರು ಅನು ಮಲಿಕ್ ರ ಕಿರುಕುಳದ ಬಗ್ಗೆ ಬಹಿರಂಗವಾಗಿ ಧ್ವನಿಯೆತ್ತಿದ್ದರು. ಇದೀಗ ಅಂತಹ ಶೋನಲ್ಲಿ ಅನು ಮಲಿಕ್ ಜತೆ ಪಾಲ್ಗೊಂಡಿದ್ದಕ್ಕೆ ಸಚಿನ್ ಟೀಕೆಗೊಳಗಾಗಿದ್ದಾರೆ. ನಿಮಗೆ ಇಂತಹ ವ್ಯಕ್ತಿ ಜತೆ ವೇದಿಕೆ ಹಂಚಿಕೊಳ್ಳುವ ಮೊದಲು ಅವರ ಮೇಲಿನ ಆರೋಪಗಳು ನೆನಪಾಗಲಿಲ್ಲವೇ ಎಂದು ಗಾಯಕಿ ಟೀಕಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದೆಹಲಿ ಮೈದಾನದ ಬಗ್ಗೆ ಬಾಂಗ್ಲಾ ಕ್ರಿಕೆಟ್ ಕೋಚ್ ಅಪಸ್ವರ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಾಳೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲ ಟಿ20 ...

news

ಡೆಲ್ಲಿ ಮಾಲಿನ್ಯ ನಮಗೆ ಸಮಸ್ಯೆಯೇ ಅಲ್ಲ ಎಂದ ರೋಹಿತ್ ಶರ್ಮಾ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಾಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ...

news

ಅನುಷ್ಕಾ ಶರ್ಮಾ ಕುರಿತ ಹೇಳಿಕೆಗೆ ಸ್ಪಷ್ಟನೆ ನೀಡಿದ ಫಾರುಖ್ ಇಂಜಿನಿಯರ್

ಮುಂಬೈ: ವಿಶ್ವಕಪ್ ವೇಳೆ ಆಯ್ಕೆ ಸಮಿತಿ ಸದಸ್ಯರು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಚಹಾ ಸರಬರಾಜು ...

news

ನಾನು ಇದೇ ರೀತಿ ಆಡ್ತಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವೇ ಆಧಿಪತ್ಯ ಸಾಧಿಸುತ್ತೆ ಎಂದ ರೋಹಿತ್ ಶರ್ಮಾ

ನವದೆಹಲಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಆರಂಭಿಕರಾಗಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿರುವ ರೋಹಿತ್ ಶರ್ಮಾ ...