Widgets Magazine

ವಿಶ್ವಕಪ್ ಮೂಲಕ ಮತ್ತೊಂದು ಇನಿಂಗ್ಸ್ ಶುರು ಮಾಡಿದ ಸಚಿನ್ ತೆಂಡುಲ್ಕರ್!

ಲಂಡನ್| Krishnaveni K| Last Modified ಶುಕ್ರವಾರ, 31 ಮೇ 2019 (09:27 IST)
ಲಂಡನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕದಲ್ಲಿ ಎಂತೆಂಥದ್ದೋ ದಾಖಲೆ ಮಾಡಿ ಕ್ರಿಕೆಟ್ ನ ಆರಾಧ್ಯ ದೈವ ಎನಿಸಿಕೊಂಡವರು. ಆದರೆ ಇದೀಗ ತಾವು ಇದುವರೆಗೆ ಮಾಡದ ಸಾಹಸವೊಂದನ್ನು ಮಾಡಿದ್ದಾರೆ.

 
ನಿನ್ನೆಯಿಂದ ಇಂಗ್ಲೆಂಡ್ ನಲ್ಲಿ ಆರಂಭವಾದ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಪಂದ್ಯದ ಮೂಲಕ ಸಚಿನ್ ಕಾಮೆಂಟರಿ ಮಾಡಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಕಾಮೆಂಟರಿ ಹೇಳುವ ಕೆಲಸ ಮಾಡಿದ್ದಾರೆ.
 
ಸಾಮಾನ್ಯವಾಗಿ ಕ್ರಿಕೆಟ್ ನಿಂದ ನಿವೃತ್ತಿಯಾದ ತಕ್ಷಣವೇ ಕ್ರಿಕೆಟಿಗರು ಕಾಮೆಂಟರಿ ಇಲ್ಲವೇ ಕೋಚಿಂಗ್ ಕೆಲಸಕ್ಕಿಳಿಯುತ್ತಾರೆ. ಆದರೆ ತೆಂಡುಲ್ಕರ್ ಇಷ್ಟು ಸಮಯ ಇದ್ಯಾವ ಕೆಲಸವನ್ನೂ ಮಾಡಿರಲಿಲ್ಲ. ಈಗ ಆ ದಾಖಲೆಯನ್ನೂ ಪೂರ್ತಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :